ಬ್ರಹ್ಮಾಂಡದ ಅಧ್ಯಯನಕ್ಕಾಗಿ ಬಾಹ್ಯಾಕಾಶದಲ್ಲಿ ನಿಯೋಜಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಯಂತ್ರ, ವಿಶ್ವದ ರೋಚಕ ರಹಸ್ಯಗಳನ್ನು ಒಂದೊಂದಾಗಿ ಹೊರಹಾಕುತ್ತಿದೆ. ಅಧಿಕೃತವಾಗಿ ಕಾರ್ಯಾರಂಭ ಮಾಡಿ ಕೆಲವೇ ತಿಂಗಳುಗಳಾಗಿದ್ದರೂ, ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಹಲವು ಆಕರ್ಷಕ ಚಿತ್ರಗಳನ್ನು ಸೆರೆಹಿಡಿದಿದೆ.

















